Friday 9 August 2013

ನಲ್ಲ ಬರುವನಂತೆ ..

Photo by : Dinesh Maneer
http://www.dineshmaneer.com/




ಭಾವಗಳೂ ಬದಲಾಗುತ್ತವೆ .. 
ಸಂಜೆ ಬಾನಂಚಲ್ಲಿ 
ರಂಗು ಬದಲಾದಂತೆ ... 
ಮನದ ಮನೆಯಲ್ಲಿ 
ಅದಾಗಲೇ ಸಡಗರ ... 
ತಂಗಾಳಿ ಹೊತ್ತು ತಂದ ಸುದ್ದಿ .. 
ನಲ್ಲ ಬರುವನಂತೆ .. 


ಶಕ್ಕೊಪ್ಪಿಸಬೇಕು ನಾ 
ನನ್ನೆಲ್ಲ ಭಾವಗಳ ಪಿಸುನುಡಿಯಲ್ಲಿ 
ನಿನಗೆ ಮಾತ್ರ ಕೇಳುವಂತೆ 
ನಿನ್ನ ಬಿಸಿಯಪ್ಪುಗೆಯಲ್ಲಿ ... 
ಗಡಿಯಾರದ ಮುಳ್ಳುಗಳದೂ 
ಮುಂದೋಡಲು ಮುಷ್ಕರ 
ನೀ ಬರುವ ಹೊತ್ತಲ್ಲಿ ..


ನಾ ನನ್ನೊಳಗೆ ನಗುತಿರಲು 
ನಿನ್ನ ಪ್ರತಿಬಿಂಬ ಕಾಣುವಾಸೆ 
ಹೊರನೆಟ್ಟ ಕಂಗಳಲಿ .. 
ಚಡಪಡಿಕೆಯ ಮನಸ್ಸು 
ಕಾಯುವಿಕೆಯ ಮುನಿಸು .. 
ನಿನ್ನ ಕಂಡಾಗ 
ಮುಗುಳು ನಗೆಯಾಗಿ 
ಬದಲಾಗುವದು ತುಟಿಯಂಚಲ್ಲಿ .


30 comments:

  1. great going , super Sandya as usual
    rgds

    ReplyDelete
  2. ಚೆನ್ನಾಗಿದೇರಿ ಸಂಧ್ಯಾ ಹಂಬಲ ಫಲಗೂಡಲಿ ಬೇಗ

    ReplyDelete
  3. ಹೇಳಲಾಗದ
    ಅವ್ಯಕ್ತ
    ತುಮಲ.. ಹಂಬಲ..
    ಚೆನ್ನಾಗಿ ಬಿಂಬಿತವಾಗಿದೆ...

    ಸೂಪರ್ ಪುಟ್ಟವ್ವಾ.. !! keep writting...

    ReplyDelete
  4. ಕಾತರದ ಕ್ಷಣಗಳ ವರ್ಣನೆ ಭಾವಪೂರ್ಣವಾಗಿದೆ!

    ReplyDelete
  5. ಭಳಿರೆ ಸಂಧ್ಯಾ ಡಾರ್ಲಿಂಗ್... ಹೃದಯಕ್ಕೆ ಕಚಗುಳಿ ಇಡುವ ಕವನ... ಸುಂದರವಾಗಿದೆ ನಿನ್ನಂತೆಯೇ...

    ReplyDelete
  6. ಕಾಯುವಿಕೆ ಮತ್ತು ಆಕೆಯ ಒಲುಮೆಯ ಉತ್ಕಟತೆ ಬಹಳ ಚೆನ್ನಾಗಿ ಮೂಡಿ ಬಂದಿದೆ.

    ಶ್ರೀ. ದಿನೇಶ್ ಮುನೀರ್ ಅವರಿಗೆ ತಿಳಿಸಿರಿ ಛಾಯಾಗ್ರಹಣ ಅಮೋಘವಾಗಿದೆ ಅಂತ.

    ReplyDelete
  7. ಮನದ ಮನೆಯಲ್ಲಿ
    ಅದಾಗಲೇ ಸಡಗರ ...
    ತಂಗಾಳಿ ಹೊತ್ತು ತಂದ ಸುದ್ದಿ ..
    ನಲ್ಲ ಬರುವನಂತೆ ..
    ಆಹಾ ಎಂಥ ಚಂದ......

    ತೋರಿಸಬೇಕೆಂಬ ಹುಸಿಮುನಿಸು ನಲ್ಲ ಬರುವ ವೇಳೆಯಲ್ಲಿ
    ಏನೆಂದರೂ ಬಿಡದೇ ನಸುನಗುವಾಗುವ ಘಳಿಗೆ...

    ತುಂಬಾ ಚಂದ ಸಂಧ್ಯಾ.....

    ReplyDelete
  8. ಕಾಯುವಿಕೆಯ ಭಾವ,ಭರವಸೆಯ ಭಾವ ,ನಿರೀಕ್ಷೆಯ ಬದುಕ ಭಾವ ..
    ವಾಹ್ ...! ಅಕ್ಷರಗಳಲ್ಲಿ ಇಷ್ಟೊಂದು ಭಾವಗಳ ಪೋಣಿಸೋದು ಸಂಧ್ಯಕ್ಕಂಗೆ ಮಾತ್ರ ಸಾಧ್ಯವಾ ?
    ಹೌದು ಅನ್ನಿಸುತ್ತೆ...

    ಸಂಜೆಯ ಬಾನಂಚ ಬಣ್ಣದಂತೆ ಮುದ್ದು ಮುದ್ದಾಗಿರಲಿ ನಲ್ಲನ ಆಗಮನ :)
    ಚಂದದ ಭಾವ ಸಂಧ್ಯಕ್ಕಾ ...
    ತುಂಬಾ ತುಂಬಾ ಇಷ್ಟ ಆಯ್ತು.

    ReplyDelete
  9. tumbaa sogasaagide.... manakke muda niDuva kavana... chennaagide...

    ReplyDelete
  10. ತಂಗಾಳಿ ಹೊತ್ತು ತಂದ ಸುದ್ದಿ ..
    ನಲ್ಲ ಬರುವನಂತೆ .. Nice lines... :)

    ReplyDelete
  11. ತುಂಬಾ ಚೆನ್ನಾಗಿದೆ....ಇಷ್ಟವಾಯಿತು

    ReplyDelete
  12. ಛಾಯ ಚಿತ್ರ ಪೆಟ್ಟಿಗೆಯ ಚಿತ್ರಕ್ಕೂ ಕೀಲಿ ಮನೆಯ ಅಕ್ಷರಕ್ಕೂ ಬೆಳಕು ನೆರಳಿನ ಭಾವನೆಗೂ ಸೇತುವೆಯಾದ ಈ ಕಿರು ಕವನ ನಿನ್ನ ಕ್ರಿಯಾಶೀಲತೆಯನ್ನು ಎತ್ತಿ ತೋರಿಸುತ್ತದೆ. ಸೂಪರ್ ಎಸ್ಪಿ

    ReplyDelete