Tuesday 5 March 2013

ಬಾಲ್ಯಕ್ಕಿಷ್ಟೇ ಗೊತ್ತು ..



ರೂಪದರ್ಶಿ : ಶ್ರೇಯಾ . ಫೋಟೋ : ವಿನೋದ್ ಕುಮಾರ್  




ಸ್ನಿಗ್ದ ನಗುವಿಗೊಂದು
ಮುಗ್ದತೆಯ ಚೌಕಟ್ಟು... 
ಪುಟ್ಟ ತಲೆಯೊಳಗೊಂದು ... 
ತುಂಟಾಟದ ಜಗತ್ತು ... 
ಬಾಲ್ಯಕ್ಕಿಷ್ಟೇ ಗೊತ್ತು ..  


ರೂಪದರ್ಶಿ : ಪ್ರಣತಿ ಹೆಗಡೆ , ಫೋಟೊ : ಸುಷಮಾ ಭಟ್ 
ಇಲ್ಲ ಬೆಡಗು ಬಿನ್ನಾಣ              
ಒನಪು ವಯ್ಯಾರಗಳ        
ಜರೂರತ್ತು . ...                             
ಬೆರಗು ಕಂಗಳಲಿ ... 
ಕುತೂಹಲದ  ಸುರುಳಿ ... 
ಬಾಲ್ಯಕ್ಕಿಷ್ಟೇ ಗೊತ್ತು ... 

    









ರೂಪದರ್ಶಿ:ಅಬ್ಜಾ ದಿಗ್ವಾಸ್ , ಪ್ರಾಚಿ ,
 ಫೋಟೊ : ದಿಗ್ವಾಸ್ ಜಿ . ಹೆಚ್ 
ಬೇಕಿಲ್ಲ ಬದುಕಿಗೊಂದೇ ದಾರಿ .. 
ಬದುಕಲ್ಲೊಂದೇ ಗುರಿಯೆಂಬ ಉಯಿಲು  
ಪುಟ್ಟ ಕಂಗಳಿಗೆ 
ಕಾಣೋದೆಲ್ಲ ಆಟದ ಬಯಲು 
ಬಾಲ್ಯಕ್ಕಿಷ್ಟೇ ಗೊತ್ತು .. 

ಗೊತ್ತಿಲ್ಲ ಸಮಾಜ 
ಅದಕ್ಕೊಂದಿಷ್ಟು ಕಟ್ಟು ಪಾಡು .. 
ಪುಟ್ಟ ಗುಲಾಬಿ  ತುಟಿಗಳಲಿ 
ಹಾಲುಗಲ್ಲದ ತೊದಲ ಹಾಡು 
ಬಾಲ್ಯಕ್ಕಿಷ್ಟೇ ಗೊತ್ತು .. 




ರೂಪದರ್ಶಿ: ಪಾರ್ಥ , ಫೋಟೊ : ಸುಷಮಾ ಭಟ್ 

ತಿಳಿದಿಲ್ಲ ಅನಾಚಾರ .. 
ಅದರದಿಷ್ಟು ಲೆಕ್ಕಾಚಾರ .. 
ಬೊಗಸೆ ಕೈಗಳಲಿ 
ಹಿಡಿದ ಸ್ಲೇಟು ಬಳಪದ ಚಿತ್ತಾರ 
ಬಾಲ್ಯಕ್ಕ್ಕಿಷ್ಟೇ ಗೊತ್ತು ... 

48 comments:

  1. ನಮ್ಮನ್ನು ಸಂಪೂರ್ಣ ಕಾಲದ ಯಂತ್ರದಲ್ಲಿ ಕೂಡಿಸಿ, ಬಾಲ್ಯಕ್ಕೆ ಹೊತ್ತೋಯ್ದ ಪುಟ್ಟ ಗೆಳತಿ. ನಿನಗೆ ನಮ್ಮ ಶರಣು.

    "
    ತಿಳಿದಿಲ್ಲ ಅನಾಚಾರ ..
    ಅದರದಿಷ್ಟು ಲೆಕ್ಕಾಚಾರ ..
    ಬೊಗಸೆ ಕೈಗಳಲಿ
    ಹಿಡಿದ ಸ್ಲೇಟು ಬಳಪದ ಚಿತ್ತಾರ
    ಬಾಲ್ಯಕ್ಕ್ಕಿಷ್ಟೇ ಗೊತ್ತು ... "
    ಕಡೆಯ ಸಾಲುಗಳಂತೂ ಅಪೂರ್ವ....

    ReplyDelete
  2. Nice one Sandhya :-) We have to see the God in the innocence of Child...

    ReplyDelete
  3. ಈ ಅಧರ್ಮಗಳ ಬೀಡಲ್ಲಿ ದೇವರಿಗೆ ನಿಲ್ಲೋಕೆ
    ಜಾಗಾನೇ ಇಲ್ವಂತೆ....
    ಅದಕ್ಕಾಗಿ ಆತ ಎಳಸು ಜೀವದಲ್ಲಿ ನೆಲೆಸಿದ್ದಾನಂತೆ...
    ಮಗುವಿನ ಮನಸ್ಸೆಂದರೆ ಹಾಗೇ ತಾನೇ?
    ಇನ್ನೂ ಏನೂ ಮೂಡಿರದ ಬೆಳ್ಳಂಬಿಳುಪಿನ ಹಾಳೆ..

    ಯಾವ ವಿಕಾರಗಳೂ ಮೂಡಿರದ ಸ್ವಚ್ಛ ಮೂರ್ತಿ...
    ಕಣ್ಣಿಗೆ ಕಂಡದ್ದೇ ಆನಂದ...

    ಬಾಲ್ಯಕ್ಕಿಷ್ಟೇ ಗೊತ್ತು ಚಂದದ ಕವಿತೆ ಸಂಧ್ಯಾ...

    ReplyDelete
    Replies
    1. ನಿಜ ರಾಘವ... ಮಕ್ಕಳ ಮನಸ್ಸು ಆಗ ತಾನೇ ಕರೆದ ಹಾಲಂತೆ ಶುದ್ಧ ...

      Delete
  4. ಎಲ್ಲಿಗೋ ಒಯ್ಯುವ 'ದೇವರ ಮುಗುಳು ನಗೆಯ' ಛಾಯಾಚಿತ್ರಗಳು...
    ಆ ಮುಗ್ಧಲೋಕವ ಮತ್ತೆ ಹಂಬಲಿಸುವಂತಾಗಿಸುವ ಅಕ್ಷರಗಳ ಚಿತ್ತಾರ...
    ಇನ್ನೇನ ಹೇಳಲಿ...ಬಾಲ್ಯದ ಆ ಹೊಳೆ ದಂಡೆಯ ಮರಳ ಗೂಡಿನ ನೆನಪಲ್ಲಿ ಕಳೆದುಹೋಗಿದ್ದೇನೆ...
    ಸಂಧ್ಯಾ - ನಿಜಕ್ಕೂ ಹೊಟ್ಟೆಕಿಚ್ಚಾಗುವಷ್ಟು ಖುಷಿಯಾಗುತ್ತಿದೆ ಭಾವ ಬರಹದಲಿ ತೇಲಿ...

    ReplyDelete
  5. ಭಾರತ ಕೃಷ್ಣ ಪರಮಾತ್ಮ ಹೇಳುತ್ತಾನೆ "ನಾನು ಹೇಳಿದಂತೆ ಕೇಳು ಆದರೆ ನಾ ಮಾಡಿದಂತೆ ಮಾಡಬೇಡ" ಆದರೆ ಮಕ್ಕಳು ಹೇಳುತ್ತವೆ "ಮಾಡೋದನ್ನ ಅನುಸರಿಸಿ ಜಗತ್ತನ್ನು ಸುಂದರವಾಗಿರಿಸಿ"
    ಈ ಮಾತುಗಳು ನಿನ್ನ ಕವನದ ಸಾಲುಗಳನ್ನು ಓದಿದಾಗ ಮನಪಟಲಕ್ಕೆ ಬಡಿಯಿತು. ಸುಂದರವಾದ ಜಗತ್ತು ಆ ಬಾಲ್ಯದ ಲೋಕ. ಅಷ್ಟೇ ಸುಂದರವಾಗಿ ತೆರೆಗೆ ತಂದಿರುವ ಪದಗಳು ಅದಕ್ಕೆ ಒಪ್ಪುವ ಚಿತ್ರಗಳು ಎರಡು ಹೊಂದಿಕೆಯಾಗಿವೆ. ಎಸ್ ಪಿ ಸೂಪರ್

    ReplyDelete
    Replies
    1. ಮಕ್ಕಳನ್ನು ಸಂಭಾಳಿಸುವುದು ಕಷ್ಟ ... ಅವರಂತೆ ನಡೆಯುವುದೇ ಸುಲಭ ಶ್ರೀಕಾಂತಣ್ಣ

      Delete
  6. ಒಳ್ಳೆಯತನ ಅಷ್ಟೇ ಗೊತ್ತಿರುವ ಬಾಲ್ಯಕ್ಕೊಮ್ಮೆ ಹೋಗಿ ಬಂದ ಹಾಗಾಯ್ತು! ಉತ್ತಮ ಕವಿತೆ, ಸಂಧ್ಯಾ ಭಟ್ :)

    ReplyDelete
  7. ಚಂದದ ಕವನಕ್ಕೆ ಅಷ್ಟೇ ಚಂದದ ಚಿತ್ರಗಳನ್ನೂ ಜೋಡಿಸಿದ್ದಿ..
    ನೈಸ್ ಒನ್ ಡಾರ್ಲಿಂಗ್...

    ReplyDelete
  8. ಮಕ್ಕಳ ಮುಗ್ಧತೆಯಲ್ಲಿ ದೇವರನ್ನು ಕಾಣುತ್ತೇವೆ... ಸುಂದರ ಬಾಲ್ಯ ನೆನೆಪಿಸುವ ಸಾಲುಗಳು ಸಂಧ್ಯಾ... ನಾವು ಮಕ್ಕಳಾಗಬಾರದೇ ಎಂದೆನಿಸುತ್ತದೆ.

    ReplyDelete
  9. Nice sandya ...ಇಲ್ಲ ಬೆಡಗು ಬಿನ್ನಾಣ
    ಒನಪು ವಯ್ಯಾರಗಳ
    ಜರೂರತ್ತು . ...liked it

    ReplyDelete
    Replies
    1. Thank you... Prasaad, Sush Darling, Sugunakka... and Venkatesh Hegde...:)

      Delete
  10. ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೇ ಏತಕೋ ! beautiful pictures n wonderful lines...

    ReplyDelete
  11. ಹೌದು, ಈ ಮಕ್ಕಳ ಬಾಲ್ಯ ಯಾವಾಗಲೂ ಹೀಗೆ ಕುಶಿ ಕುಶಿಯಾಗಿರಲಿ..beautiful lines for each picture..Thanks for using Shreya's picture..- Vanitha.

    ReplyDelete
    Replies
    1. ಶ್ರೇಯಾಳ ಫೋಟೋ ನೋಡುತ್ತಾ ಬಾಲ್ಯ ನೆನಪಾಯಿತು ... ಹಾಗೆಯೇ ಈ ಸಾಲುಗಳು ಕೂಡ .. ಚಂದದ ಫೋಟೊ. ಈ ಫೋಟೊ ಬಳಸುವಾಗ ಎಲ್ಲೋ ಒಂದು ಸಣ್ಣ ಭಯವಿತ್ತು. ನಿಮ್ಮ ಆತ್ಮೀಯತೆಯಿಂದ ದೂರವಾಯ್ತು .

      ಧನ್ಯವಾದ ವನಿತಾ ಮೇಡಂ ..

      Delete
  12. beautiful lines for very good pictures..Thanq for using my picture...

    ReplyDelete
    Replies
    1. ಚಿತ್ರಗಳು ಬರೆಸುತ್ತವೆ... ಅಲ್ಲಿನ ಭಾವಗಳು ತಂತಾನೇ ಸಾಲುಗಳಾಗುತ್ತವೆ ... ಅಂಥಹ ಸಾಲುಗಳನ್ನು ಕಟ್ಟಿಕೊಡುವ ಸಾಮರ್ಥ್ಯ ಫೋಟೊಗಳಿಗಿದೆ. ಅಂಥಹ ಚಂದದ ಫೋಟೊ ಕೊಟ್ಟಿದ್ದಕ್ಕೆ , ಸಾಲುಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ..
      http://kooki.ca/images/blackdot.png
      ಪುಟ್ಟ ಮಕ್ಕಳಿಗೆ ದೃಷ್ಟಿಯಾಗದಿರಲಿ ...

      Delete
  13. ಸುಂದರ ಸಾಲು ಸಂಧ್ಯಕ್ಕಾ. ...
    ಪದಗಳ ಪಕ್ಕವಿರುವ ಫೋಟೋಗಳು ಈ ಬ್ಲಾಗ್ ಬರಹದ ಹೊಸತನದ ಅನಿಸ್ತು...
    ಚೆಂದ...ಚೆಂದ...

    ReplyDelete
  14. ತುಂಬಾ ಚೆನ್ನಾಗಿದೆ ಸಂಧ್ಯಾ.... ಚಿತ್ರಗಳು ಅಧ್ಭುತವಾಗಿದೆ... :))

    ReplyDelete
  15. ಮಕ್ಕಳ ಮುಗ್ಧ ರೂಪವನ್ನ ಶಬ್ಧಗಳಲ್ಲಿ ಸುಂದರವಾಗಿ ಸೆರೆಹಿಡಿದಿದ್ದೀರ. ತುಂಬಾ ಹಿಡಿಸಿತು.
    ಶುಭವಾಗಲಿ.

    ReplyDelete
  16. ಹಾವು ತೂಗಿ
    ಹೆಡೆಯವ ಬಿಚ್ಚಿ
    ಮುಖದ ಬಳಿ ಬಂದರೆ
    ಕೊಡುವುದಷ್ಟೇ ಗೊತ್ತು
    ಹಾಗೇ ಕಣ್ಮುಚ್ಚಿ ಹೂಮುತ್ತು
    ಬಾಲ್ಯಕಿಷ್ಟೇ ಗೊತ್ತು.....
    ಸುಂದರ ಕಲ್ಪನೆ ಮತ್ತು ತಕ್ಕ ಭಾವಸೆರೆ ಹಿಡಿದ ಭಾವಚಿತ್ರ...ಸುಂದರ ಪದಗಳ ಚಿತ್ರ ಚೌಕಟ್ಟು...ಸಂಧ್ಯಾ ಪುಟ್ಟಾ...ಸೂಪರು.

    ReplyDelete
    Replies

    1. ಭಯ್ಯಾ ಚಂದದ ಪದ ಚೌಕಟ್ಟು ಈ ನಿಮ್ಮ ಕಾಮೆಂಟ್... :)

      ಧನ್ಯವಾದಗಳು
      --

      Delete
  17. kavite tumba chennagi ide Sandhya......keep writing :)

    ReplyDelete

  18. ನಿಜ .... ಬಾಲ್ಯವಿಷ್ಟೇ ....

    ಪುಟ್ಟ ಪುಟ್ಟ ಪ್ರೀತಿ ,ಚಿಕ್ಕ ಚಿಕ್ಕ ಕನಸುಗಳು ...

    ಸ್ನಿಗ್ಧ ,ಮುಗ್ಧ ನಗು .....

    ಹುಳುಕೇ ಕಾಣದ ಸ್ವಚ್ಚಂದ ಮನ ...

    ವಾಹ್ !!! ಎಷ್ಟೆಲ್ಲಾ ಅಲ್ವಾ ಬಾಲ್ಯ ಅಂದ್ರೆ ??

    ತುಂಬಾ ಇಷ್ಟವಾದ ಕವನ ಸಂಧ್ಯಕ್ಕ :)

    ಬರೀತಾ ಇರಿ

    ಧನ್ಯವಾದ

    ReplyDelete
    Replies
    1. ಹೌದು ಪುಟ್ಟಾ .. ಬಾಲ್ಯವೆಂದರೆ ಸಾಕಷ್ಟು .. ಮೊಗೆದಷ್ಟು ... ಖುಷಿಯೇ ... ನಾ ಬರೆದದ್ದದ್ದು ಕೆಲವಷ್ಟೇ ...
      Thank you

      Delete
  19. ತುಂಬಾ ಸುಂದರ ಕವಿತೆ..
    ಹೂವಿನಂಥಹ ಬಾಲ್ಯದ ಬಗೆಗೆ..

    ಬಹಳ ಇಷ್ಟವಾಯ್ತು ಸಾಲುಗಳು..

    ಹಾಗೂ ಮುದ್ದಾದ ರೂಪದರ್ಶಿಗಳು..
    ಫೋಟೊ ತೆಗೆದವರಿಗೂ ಜೈ ಹೋ !!

    ReplyDelete
    Replies
    1. ಈ ಮುದ್ದಾದ ಮಕ್ಕಳ ಚಿತ್ರಗಳು ನನ್ನ ಸಾಲುಗಳನ್ನು ಸುಂದರಗೊಳಿಸಿದ್ದು.
      ಧನ್ಯವಾದ ಪ್ರಕಾಶಣ್ಣ

      Delete
  20. No words to say... No Comments !!! :)

    ReplyDelete
  21. ಸಖತ್ತಾಗಿದ್ದು ಸಂದ್ಯಕ್ಕ..
    photos are also really nice :-)

    ReplyDelete
  22. ಮಕ್ಕಳ ಮುಗ್ಧ ಮನಸ್ಸು,ಕಪಟವರಿಯದ ಆ ಮುದ್ದು ಮುದ್ದು ನಗು ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ನಮ್ಮ ಮಕ್ಕಳೇ ಬಾಲ್ಯ ಕಳೆದು ಯೌವನಕ್ಕೆ ಕಾಲಿಟ್ಟಿದ್ದರೂ ನಾವು ಈಗಲೂ ನಮ್ಮ ಬಾಲ್ಯವನ್ನು ನೆನೆ ನೆನೆದು ಖಷಿ ಪಡುತ್ತೇವೆ.ಇನ್ನು ನಮ್ಮ ಮಕ್ಕಳ ಬಾಲ್ಯದ ನೆನಪಾದರಂತೂ ಆ ದಿನವಿಡೀ ಖುಷಿಯಾಗಿರುತ್ತೇವೆ.ತಲೆಮಾರಿನಿಂದ ತಲೆಮಾರಿಗೆ ಮಕ್ಕಳ ಬಗೆಗಿನ ಪ್ರೀತಿ,ಮಮತೆ ಹೆಚ್ಚಾಗುತ್ತಲೇ ಹೋಗುತ್ತದೆ.ಅದೇ ಮಕ್ಕಳ ಮಹಿಮೆ!

    ಬಾಲ್ಯಕ್ಕಿಷ್ಟೇ ಗೊತ್ತು ತುಂಬಾ ಮುದ್ದಾದ ಕವನ ಸಂದ್ಯಾ

    ReplyDelete
  23. ನೀವು ಬರೆದ ಈ ಕವನ Super ಆಗಿದೆ... ನಮಗೂ ಇಷ್ಟೇ ಗೊತ್ತು! :) :) ಸುಂದರ ಫೋಟೋಗಳು! ತುಂಬಾ ಇಷ್ಟ ಆಯ್ತು ;)

    ReplyDelete
  24. " ತಿಳಿದಿಲ್ಲ ಅನಾಚಾರ ..
    ಅದರದಿಷ್ಟು ಲೆಕ್ಕಾಚಾರ ..
    ಬೊಗಸೆ ಕೈಗಳಲಿ
    ಹಿಡಿದ ಸ್ಲೇಟು ಬಳಪದ ಚಿತ್ತಾರ " ಈ ಸಾಲುಗಳು ಬಾಳ ಇಷ್ಟವಾದವು.
    ಎಷ್ಟೇ ದೊಡ್ಡವರಾದರೂ, ಬಲ್ಲವರಾದರೂ...,
    ಮಕ್ಕಳ ರೀತಿಯ ತಿಳಿ ಮನಸ್ಸನ್ನು ಕಾಯ್ದುಕೊಳ್ಳುವುದು ... ಇಂಪಾಸಿಬಲ್ಲು..
    ಬಾಲ್ಯಕ್ಕಿ ಷ್ಟೇ ಗೊತ್ತು ಅಂದುಕೊಂಡೇ .. ಬಹಳಷ್ಟನ್ನು ವಿವರಿಸಿದ್ದೀರಿ..
    ಧನ್ಯವಾದಗಳು.

    ReplyDelete
  25. ಕಪಟವರಿಯದ ಬಾಲ್ಯದ ಬಗ್ಗೆ ಸುಂದರ ಕವಿತೆ, ಬಾಲ್ಯದಲ್ಲಿನ ಮುಗ್ದತೆ , ಅದರಲ್ಲಿನ ಹೂರಣವನ್ನು ಚೆನ್ನಾಗಿ ಅನಾವರಣ ಮಾಡಿ ಅದಕ್ಕೆ ಸುಂದರವಾದ ಪದಗಳ ಅಲಂಕಾರ ಮಾಡಿದ ಕವಿತೆ ಇದು ತಂಗ್ಯವ್ವ, ಬಹಳ ಇಷ್ಟಾ ಆಯ್ತು

    ReplyDelete